
1st April 2025
ಮಲ್ಲಮ್ಮ ನುಡಿ ವಾರ್ತೆ
ಬಾಗಲಕೋಟೆ,ಮಾ.31-ತಾಲೂಕಿನ ಕಲಾದಗಿ ಬಳಿಯ ಹಿರೇಸಂಶಿ ಗ್ರಾಮದ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ ಸೋಮವಾರ ಸಂಭ್ರಮದಿAದ ಜರುಗಿತು.
ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ನಂತರ ಘಟಪ್ರಭಾ ನದಿ ದಡದಲ್ಲಿ ಗಂಗಾಪೂಜೆ ನೆರವೇರಿಸಲಾಯಿತು.
ಸರ್ಕಾರಿ ತೋಟದ ಶಾಲೆಯಿಂದ ಆರಂಭವಾದ ಪಲ್ಲಕ್ಕಿ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ದೇವಸ್ಥಾನ ತಲುಪಿತು. ಮೆರವಣಿಗೆಯುದ್ದಕ್ಕೂ ಭಂಡಾರ ಎರಚಿ, ಬೀರಲಿಂಗೇಶ್ವರನಿಗೆ ಜೈಕಾರ ಹಾಕುತ್ತ ಭಕ್ತರು ಸಂಭ್ರಮಿಸಿದರು.
ಮಹಿಳೆಯರು ಆರತಿ ಹಿಡಿದು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ದೇವಸ್ಥಾನದ ಆವರಣದಲ್ಲಿ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
ಏಪ್ರಿಲ್ ಫೂಲ್ ಮಾಡುವ ಬದಲು ಏಪ್ರಿಲ್ ಕೂಲ್ ಮಾಡುವ ವನಸಿರಿ ತಂಡದ ಕಾರ್ಯ ಶ್ಲಾಘನೀಯ....... ಶರಣಬಸಪ್ಪ ಮುಖ್ಯಗುರುಗಳು